ಧರ್ಮಸ್ಥಳ ವಿಚಾರದಲ್ಲಿ ಅಪಪ್ರಚಾರಕ್ಕೆ ಎಚ್ಚರಿಕೆ – ಎಸ್‌ಪಿ ಕಾನೂನು ಕ್ರಮದ ಎಚ್ಚರಿಕೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅನೇಕ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಠಾಣೆಯಲ್ಲಿ ಬಿ.ಎನ್.ಎಸ್. ಸೆಕ್ಷನ್ 211ರಡಿ ದೂರು ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ. ಈ ಮಧ್ಯೆ ಊಹಾಪೋಹ ಸೃಷ್ಟಿಸಿ ಯಾವುದೇ ಸುದ್ದಿ ಪ್ರಚಾರ ಪಡಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರಿಷ್ಠಾಧಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈ ಸಂಬಂಧ ಅನೇಕ ವರದಿಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರೊಂದಿಗೆ ಅಥವಾ ಸುದ್ದಿ ಮಾಧ್ಯಮಕ್ಕೆ ಹಂಚಿಕೊಳ್ಳುವಂತಹ ಖಚಿತ ಮಾಹಿತಿಗಳಿದ್ದಲ್ಲಿ, ಅದನ್ನು ಅಧಿಕೃತವಾಗಿ ಇಲಾಖೆ ತಿಳಿಸಲಿದೆ.